Thursday, February 24, 2011

ಅತ್ತೆ - ಸೊಸೆ

ನನ್ನ ಮದುವೆಗೆ ಮುಂಚೆ ಅತ್ತೆ-ಸೊಸೆ ಜಗಳ ಸಿನಿಮಾದಲ್ಲಿ ನೊಡಿದ್ದೆ. ಅಕ್ಕಪಕ್ಕದವರ ಮನೆಯಲ್ಲಿ ಆಗುವುದು ಕಂಡಿದ್ದೆ. ಅವರಿವರು ಮಾತಾಡಿಕೊಳ್ಳುವುದನ್ನು ಕೇಳಿದ್ದೆ.....

ಆದರೆ ನನ್ನ ಸ್ವಂತ ಜೀವನದಲ್ಲೇ ನಡೆಯುತ್ತದೆಯೆಂದು ಕನಸು ಮನಸಿನಲ್ಲೂ ಅಂದುಕೊಂಡಿರಲಿಲ್ಲ....!


೧. ಸಾಮಾನ್ಯವಾಗಿ ನೀವು ಜೀವನದಲ್ಲಿ ಸಾಕಷ್ಟು ಯಶಸ್ಸನ್ನು ಸಾಧಿಸಿರುವುದಿಲ್ಲ. ಈ ಕಾರಣದಿಂದ ನಿಮ್ಮ ಹೆಂಡತಿಗೆ ನಿಮ್ಮ ಮೇಲೆ ಬೇಸರವಿದ್ದೇ ಇರುತ್ತದೆ. ಅಮ್ಮನಿಗೆ ಈ ವಿಷಯ ಅರ್ಥವಾಗಿರುವುದೇ ಇಲ್ಲ. -- ಇಂಥ ವಿಷಯಗಳನ್ನು ಅಮ್ಮನಿಗೆ ಅರ್ಥ ಮಾಡಿಸುವುದರ ಜಬಾಬ್ದಾರಿ ನಿಮ್ಮದಾಗಿರುತ್ತದೆ.

೨. ಇನ್ನು ನಿಮ್ಮ ಅಕ್ಕ/ತಂಗಿಯರ ಪಾತ್ರ ಈಗಿನ ದೂರಸಂಪರ್ಕ ಯುಗದಲ್ಲಿ ಅತೀ ಹೆಚ್ಚು. ಇವರು ಅತ್ತೆ-ಸೊಸೆ ಜಗಳದಲ್ಲಿ ಸಾಮಾನ್ಯವಾಗಿ ವೇಗೋತ್ಕರ್ಷಕರಾಗಿ ಹಾಗು ಅತೀ ಒಳ್ಳೆಯ ಸಂವಾಹಕರಾಗಿ ಕಾರ್ಯ ನಿರ್ವಹಿಸುತ್ತಾರೆ. ---- ಇವರ ಪಾತ್ರವನ್ನು ನೀವು ಅರ್ಥ ಮಾಡಿಕೊಂಡು ಅವರಿಗೆ ಸಮಯಕ್ಕೆ ಸರಿಯಾಗಿ ನೀವೇ ತಿಳುವಳಿಕೆ ಹೇಳದ್ದಿದ್ದರೆ ಈ ವಿಷಯ ಅತೀ ಗಂಭೀರವಾಗುವ ಸಾಧ್ಯತೆಯೇ ಹೆಚ್ಚು.

೩. ನಿಮ್ಮ ಹೆಂಡತಿಯ ಮುಂದೆ ನಿಮ್ಮ ಅಮ್ಮನನ್ನು ಹೊಗಳುವುದು ಹಾಗೆ ನಿಮ್ಮ ಹೆಂಡತಿ ಹೇಳಿದಂತೆ ನಿಮ್ಮ ಅಮ್ಮನ ಮುಂದೆ ನಡೆದುಕೊಳ್ಳುವುದು --- ಈ ಎರಡೂ ಇಬ್ಬರಲ್ಲೂ ಒಂದು ರೀತಿಯ ಅಭದ್ರತೆ ಕಾಡುತ್ತದೆ. ಆದಷ್ಟು ಇಂಥದನ್ನು ತಮಾಷೆಗೂ ಮಾಡಬೇಡಿ.

೪. ನಿಮಗೆ ಯಾರನ್ನೇ ಮೂದಲಿಸಬೇಕಾದರೂ ಅವರ ಜೊತೆ ಏಕಾಂತವಾಗಿರುವಾಗಲೇ ಮೂದಲಿಸಿ. ಅಮ್ಮನ ಮುಂದೆ ಹೆಂಡತಿಯನ್ನು , ಹೆಂಡತಿಯ ಮುಂದೆ ಅಮ್ಮನನ್ನು ಮೂದಲಿಸುವುದು 'ಶಾರ್ಟ್ ಸರ್ಕ್ಯುಟ್' ಮಾಡಿದ ಹಾಗೆ... ಬೆಂಕಿ ಹತ್ತಿಕೊಳ್ಳುತದೆ.

೫. ನಿಮಗಿಂತಲೂ ಯಶಸನ್ನು ಸಾಧಿಸಿರುವ ಬಂಧುಗಳು/ಗೆಳೆಯರು ನಿಮ್ಮ ಮನೆಯ ಹತ್ತಿರವಿದ್ದರೆ ನಿಮ್ಮ ಹೆಂಡತಿಗೆ ಸಹಿಸಿಕೊಳ್ಳಲು ಆಗುವುದೇ ಇಲ್ಲ. ಇದರಲ್ಲಿ ನಿಮ್ಮ ತಪ್ಪು ಇರುವುದಿಲ್ಲ. ನಿಮ್ಮ ಮನೆ ಇಂಥ 'ಯಶಸ್ಸು ಸಾಧಿಸಿರುವವರ' ಮನೆಗಿಂತ ದೂರವಿದ್ದರೆ ವಾಸಿ (ಅದೃಷ್ಟವಶಾತ್ ನಿಮಗೆ ಆ ಆಯ್ಕೆ ಇದ್ದರೇ...)

Wednesday, February 23, 2011

ನಮಸ್ಕಾರ....

ಇದು ನನ್ನ ಮೊದಲ ಲೇಖನ.... ಈಗ ನನಗೆ ಖುಷಿಯಗುತ್ತಿರುವುದಕ್ಕೆ ಕಾರಣ ಏನೆಂದರೆ ಇಷ್ಟು ಸಲೀಸಾಗಿ ಕನ್ನಡ ಭಾಷೆಯನ್ನು ಅಂತರ್ಜಾಲ ತಾಣಗಳಲ್ಲಿ ಬರೆಯಬಹುದಲ್ಲ ಎಂದು!! ಇಷ್ಟು ದಿನ ಈ ಪ್ರಯತ್ನವನ್ನೇ ಪಟ್ಟಿರಲಿಲ್ಲ!!!

ಇರಲಿ... ಈ ರೀತಿ ಸುಲಭವಾಗಿ, ಅದೂ ಕನ್ನಡದಲ್ಲಿ ಬರೆಯಲು ಅನುಕೂಲ ಆಗಿರುವುದರ ಹಿಂದೆ ಅಸಂಖ್ಯಾತ ಜನರ ಪರಿಶ್ರಮ ಹಾಗೂ ಶ್ರದ್ದೆಯ ಯೋಗದಾನವಿರುತ್ತದೆ. ಅವರಿಗೆಲ್ಲರಿಗೂ ನನ್ನ ಧನ್ಯವಾದಗಳು.